Monday, August 18, 2008
ಜಂಟಿ ಬಸ್‌ಗಳ ಕಿರಿಕಿರಿ
ಬೆಂಗಳೂರು ಆಗಸ್ಟ್ ೧೮: ಬೆಂಗಳೂರಿನಲ್ಲಿ ಈಗ ಯಮದೂತ ಬಿ.ಟಿ.ಎಸ್. ಬಸ್ಸುಗಳ ಜೊತೆಗೆ ಜಂಟಿ ವಾಹನಗಳು ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಮೊದಲೇ ಆಟೋರಿಕ್ಷಾಗಳದಿಂದ ಬೇಸತ್ತಿರುವ ಜನಸಾಮಾನ್ಯ ಈಗ ಈ ಜಂಟಿವಾಹನಗಳ ಕಾಟದಿಂದ ಪರದಾಡಬೇಕಾಗಿದೆ. ಅಷ್ಟಕ್ಕೂ ಈ ಜಂತಿವಾಹನಗಳಿಂದಾಗುವ ಉಪಯೋಗವಾದರೂ ಏನು?. ಈ ಜಂಟಿವಾಹನಗಳು ಯಾವುದೇ
ತೊಂದರೆಯಿಲ್ಲದೆ, ಜನಗಳಿಗೆ, ಟ್ರಾಫಿಕ್‌ಗೆ ತೊಂದರೆ ಮಾಡದೆ ಚಲಿಸಬಹುದಾದ ಉತ್ತಮ ರಸ್ತೆಗಳಿವೆಯೇ?.
ಖಂಡಿತಾ ಇಲ್ಲ. ಬೆಂಗಳೂರಿನ ಭಾಗಶಃ ರಸ್ತೆಗಳು ತುಂಬಾ ಕಿರಿದಾಗಿರುವುದರಿಂದ ಈ ಜಂಟಿ ಬಸ್‌ಗಳು ತಿರುವು ತೆಗೆದುಕೊಳ್ಳಲು ತುಂಬಾ ತ್ರಾಸಪಡಬೇಕಾಗುತ್ತದೆ. ಆದರೆ ಈ ಜಂಟಿ ಬಸ್‌ನಲ್ಲಿ ಪ್ರಯಾಣಿಕರೇನೂ ತುಂಬಿ-ತುಳುಕುವಂತಹ ಪರಿಸ್ಥಿತಿಯಂತೂ ಅಪರೂಪ. ಮೊದಲೇ ಆಟೋಗಳಿಂದ ಟ್ರಾಫಿಕ್ ಕಿರಿಕಿರಿ ಆಗುತ್ತಿರುವುದಲ್ಲದೆ ಈಗ ಈ ಜಂಟಿ ಬಸ್ಗಳು ಬೇರೆ ತೊಂದರೆಯಾಗಿದೆ. ಏಕೆಂದರೆ ಈ ಬಸ್‍ಗಳಿಗೆ ತಿರುವು ತೆಗೆದುಕೊಳ್ಳಲು ಜಾಸ್ತಿ ಜಾಗ ಬೇಕಾಗುವುದರಿಂದ ತಿರುವುಗಳಲ್ಲಿ ವಾಹನ ಓಡಿಸುವವರಂತೂ ಜೀವ ಕೈಯಲ್ಲಿ ಹಿಡಿದುಕೊಂಡು ಸವಾರಿ ಮಾಡುವಂತಹ ಪರಿಸ್ಥಿತಿ. ಒಂಟಿ ಬಸ್‌ಗಳೇ ಖಾಲಿ ಹೋಗುತ್ತಿರುವ ಸಮಯದಲ್ಲಿ ಈ ಜಂಟಿ ಬಸ್ಗಳು ಬೇರೆ ಕೇಡು.
ಆದ್ದರಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು, ಈ ಜಂಟಿ ಬಸ್‌ಗಳನ್ನು ರಸ್ತೆಗಳು ಅಗಲವಾಗಿರುವ ಹಾಗೂ ಅಗತ್ಯವಿರುವ ಕಡೆ ಮಾತ್ರ ಹಾಕಿ, ಸಾರ್ವಜನಿಕರಿಗೆ ಕಿರಿಕಿರಿ ತಪ್ಪಿಸಬೇಕಾಗಿದೆ.
Subscribe to:
Post Comments (Atom)
1 comment:
ನಿಮ್ಮ ಅನಿಸಿಕೆಗಳಿಗೆ ಸ್ವಾಗತ.....ದಯವಿಟ್ಟು ನಿಮ್ಮ ಅನಿಸಿಕೆಗಳನ್ನು, ಅಭಿಪ್ರಾಯಗಳನ್ನು, ಅನುಭವವನ್ನು ನಮ್ಮ ಜೊತೆ ಹಂಚಿಕೊಳ್ಳಿ...
Post a Comment