Wednesday, December 17, 2008

ಚೈನಾದ ಗುಪ್ತಚಾರರು ಬೆಂಗಳೂರಿನಲ್ಲಿ



ಬೆಂಗಳೂರು ದಶಂಬರ ೧೭ :ಇತ್ತೀಚಿನ ಮುಂಬೈ ಭಯೋತ್ಪಾದಕ ದಾಳಿಯ ನೆನಪು ಮಾಸುವ ಮುನ್ನವೇ ಇನ್ನೊಂದು ಭಯೋತ್ಪಾದಕ ರಾಷ್ಟ್ರವಾದ ಚೈನಾ ಭಾರತದಲ್ಲಿ ಸದ್ದಿಲ್ಲದೆ ತನ್ನ ಭಯೋತ್ಪಾದನೆಯ ಕಬಂಧ ಬಾಹು ಚಾಚುತ್ತಿದೆ.

ಅದೂ "ಐ.ಟಿ.ಸಿಟಿ" ಎಂದೇ ಪ್ರಸಿದ್ಧವಾಗಿರುವ ಬೆಂಗಳೂರು ನಗರದಲ್ಲಿ ಚೈನಾದ ಕೆಲವು ಗುಪ್ತಚಾರರು ತಮ್ಮ ಕೈಚಳಕ ತೋರಿರುವುದು ಗಂಭೀರ ವಿಷಯವಾಗಿದೆ. ಇದು ಬಹಿರಂಗವಾದದ್ದು ಇನ್ಫೋಸಿಸ್ ಸಂಸ್ಥೆಯ ಕಾಂಟ್ರಾಕ್ಟ್ ಚೈನಾದ ಒಂದು ಸಂಸ್ಥೆಯ ಪಾಲಾಗಿರುವುದು ಹೇಗೆ ಎಂಬುದನ್ನು ತನಿಖೆಪಡಿಸಿದಾಗಲೇ. ಅಂದರೆ ಇನ್ಫೋಸಿಸ್ ಸಂಸ್ಥೆಯ ಟೆಂಡರ್ ಬೆಲೆ ಬಹಿರಂಗವಾಗಲು ಹೇಗೆ ಸಾಧ್ಯ?. ಇದನ್ನು ಅಂತರ್ಜಾಲದ ಮೂಲಕ ಹ್ಯಾಕ್ ಮಾಡಿ, ಕಡತ ಜಾಲಾಡಿ ಇನ್ಫೋಸಿಸ್ ಸಂಸ್ಥೆಯ ಟೆಂಡರ್ ಬೆಲೆಗಿಂತ ಕಡಿಮೆ ಬೆಲೆ ನಮೂದಿಸಿ ಈ ಕಾಂಟ್ರಾಕ್ಟ್ ಪಡೆಯಲಾಗಿದೆ.
ಇದನ್ನು ಮಾಡಿದವರಾರು?
ಇದರ ಹಿಂದೆ ದೊಡ್ಡ ಜಾಲವೇ ಇದೆ. ಇನ್ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಕೆಲ ಚೈನಾ ರಾಷ್ಟ್ರೀಯರು, ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿತ್ತಿರುವ ಚೈನಾ ವಿದ್ಯಾರ್ಥಿಗಳು, ಚೈನಾದ ಹ್ಯಾಕರ್‌ಗಳು....ಮುಂತಾದವರು ಈ ಒಂದು ದೊಡ್ಡ ರಾಷ್ಟ್ರ ದ್ರೋಹದ ಕೆಲಸದಲ್ಲಿ ಶಾಮೀಲಾಗಿರುವ ಸಾಧ್ಯತೆ ಇದೆ. ಚೈನಾ ಸರಕಾರ ಈ ವಿದ್ಯಾರ್ಥಿಗಳು ಹಾಗೂ ನೌಕರರನ್ನೇ ಗುಪ್ತಚಾರರನ್ನಾಗಿ ಮಾಡಿ, ಅವರಿಂದ ಎಲ್ಲ ರೀತಿಯ ಗುಪ್ತ ವಿಷಯಗಳನ್ನು ಪಡೆಯುತ್ತಿದೆ. ಅಂದರೆ ಬೆಂಗಳೂರು ತಂತ್ರಾಶದಲ್ಲಿ ಮುಂದುವರಿಯಲು ಕಾರಣವೇನು, ಅದರ ಹಿನ್ನೆಲೆ,ಕಾರಣಗಳು ಮುಂತಾದ ಮಾಹಿತಿಯನ್ನು ಗುಪ್ತವಾಗಿ ಪಡೆಯುತ್ತಿದೆ. ಬೆಂಗಳೂರಿನ ಅನೇಕ ತಂತ್ರಾಂಶ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಚೀನೀಯರು ಈ ದೇಶಕ್ಕೆ ಮುಳ್ಳಾಗಿ, ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ.
ಚೈನೀಯರು ಈಗ ತಂತ್ರಜ್ಞಾನವನ್ನು ಕದಿಯಲು ಶುರು ಮಾಡತೊಡಗಿರುವುದು ಅವರ ಮೆದುಳು ಖಾಲಿಯಾಗಿರುವುದರ ಸೂಚನೆಯೇ?. ಇದೇ ಚೈನಾದ ವ್ಯಕ್ತಿಯೊಬ್ಬ ಬಲ್ಜಿಯಂನಲ್ಲಿ ಕೂಡಾ ತಂತ್ರಜ್ಞಾನ ಕದಿಯಲು ಹೋಗಿ ಸಿಕ್ಕಿ ಬಿದ್ದು, ಈ ಚೈನೀಯರ ದೇಶದ್ರೋಹಿತನ ಅಲ್ಲಿಯೂ ಬಯಲಾಯಿತು. ಅವನಿಂದ ಪ್ರಪಂಚದ ಎಲ್ಲೆಡೆ ಈ ಚೈನಾದ ಗುಪ್ತಚಾರರು ತಂತ್ರಜ್ಞಾನ ಕದಿಯುವಲ್ಲಿ ಕಾರ್ಯಮಗ್ನರಾಗಿದ್ದಾರೆ ಎಂಬ ವಿಷಯ ಬಹಿರಂಗವಾಯಿತು.
ಎಚ್ಚರಿಕೆ ಅಗತ್ಯ
ಈಗಲಾದರೂ ಕರ್ನಾಟಕ ಸರಕಾರ ಹಾಗೂ ಭಾರತ ಸರಕಾರಗಳು ಎಚ್ಚೆತ್ತು ಈ ಚೈನಾದ ವಿದ್ಯಾರ್ಥಿಗಳು, ನೌಕರರ ಬಗ್ಗೆ ನಿಗಾ ಇಟ್ಟು, ಅವರನ್ನು ಪ್ರತಿಬಂಧಿಸುವ ಬಗ್ಗೆ ವಿಚಾರ ಮಾಡಬೇಕು.


ಕೃಪೆ-ಡಿ.ಎನ್.ಎ ದಿನಪತ್ರಿಕೆ

1 comment:

Anonymous said...

We are surrounded by terrorist countries from all the sides, how can we defend ourselves?.