Friday, June 04, 2010

ಕನ್ನಡ ಹಾಗೂ ಕರ್ನಾಟಕ ದ್ರೋಹಿಗಳು

ಬೆಂಗಳೂರಿನಲ್ಲಿ ನಡೆಯುತ್ತಿರುವ ಬಂಡವಾಳ ಹೂಡಿಕೆ ಸಮ್ಮೇಳನ ಈಗ ರೈತರ ಎದೆಯಲ್ಲಿ ಭಾರೀ ಭಯ ಹುಟ್ಟಿಸಿದೆ. ಬಂಡವಾಳ ಹೂಡಿಕೆಯ ನೆಪದಲ್ಲಿ ಉದ್ಯೋಗ ಸೃಷ್ಟಿಯಾದರೂ ನಮ್ಮ ರೈತರಿಗೆ ಚಿಕ್ಕಾಸಿನ ಉಪಯೋಗವೂ ಇಲ್ಲ.
ಇನ್ನು ಶುರುವಾಗುತ್ತೆ ನೋಡಿ, ಈ ಸರಕಾರ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳುವುದರ ಜೊತೆಗೆ, ರೈತರಿಗೆ ಸೇರಬೇಕಾದ ನೀರು, ವಿದ್ಯುತ್ ಮುಂತಾದವುಗಳನ್ನು ಕಸಿದುಕೊಂಡು ಕರ್ನಾಟಕ ರಾಜ್ಯದ ರೈತರಿಗೆ ಛಡಿ ಏಟು ನೀಡುತ್ತದೆ. ಈ ಬಿ.ಜೆ.ಪಿ. ಸರಕಾರ ಯಾಕಾದರೂ ಬಂತು ಎಂದು ರೈತರು ಹಣೆ ಹಣೆ ಚಚ್ಚಿಕೊಳ್ಳುತ್ತಿದ್ದಾರೆ. ದೇವರೇ..ಈ ರಾಜ್ಯವನ್ನು ಈ ಬಿ.ಜೆ.ಪಿ. ಎಂಬ ಕನ್ನಡ ವಿರೋಧಿ, ಕರ್ನಾಟಕ ವಿರೋಧಿ ಹಾಗೂ ರೈತ ವಿರೋಧಿ ಸರಕಾರದಿಂದ ಯಾರು ಕಾಪಾಡುತ್ತಾರೋ?. ಸಾಂಸ್ಕೃತಿಕ ಸೂಳೆಗಾರಿಕೆ ನಡೆಸುತ್ತಿರುವ ಐ.ಟಿ ಹಾಗೂ ಬಿ.ಟಿ. ಮಂದಿಯಿಂದ ನಮ್ಮ ರಾಜ್ಯವನ್ನು ರಕ್ಷಿಸುವವರಾರು?. ಕೇವಲ ಉದ್ಯೋಗ ಸೃಷ್ಟಿಯ ನೆಪದಿಂದ ರೈತರನ್ನು ದಮನಿಸುವ ಕೆಲಸ ಈ ಸರಕಾರ ಅಚ್ಚುಕಟ್ಟಾಗಿ ಮಾಡುತ್ತಿದೆ. ಆ ಉದ್ಯೋಗದಲ್ಲಿ ಕನ್ನಡಿಗರ ಪಾಲು ಖಂಡಿತಾ ನಗಣ್ಯ. ಏಕೆಂದರೆ ಈ ಕನ್ನಡ ವಿರೋಧಿ, ದರಿದ್ರ ಕರ್ನಾಟಕ ಸರಕಾರ ಭಾಷಾ ಅಲ್ಪಸಂಖ್ಯಾತರಿಗೆ ಮಣೆ ಹಾಕಿ ತಾನು ಮಾತ್ರ ಈ ದೇಶವನ್ನು ಪ್ರೀತಿಸುವ ಜಾತ್ಯಾತೀತ ಪಕ್ಷ ಎಂಬುದನ್ನು ಈ ಜಗತ್ತಿಗೆ ತೋರಿಸುವ ಒಂದು ನೀಚ ಕೆಲಸ ಮಾಡುತ್ತಿದೆ.
ಈ ಯಡಿಯೂರಪ್ಪ ಈಗ ರೆಡ್ಡಿ ಸಹೋದರರ ಕೃಪಾಕಟಾಕ್ಷದಿಂದ ತಾನು ಕೂಡಾ ರಾಜ್ಯವನ್ನು ಲೂಟಿ ಮಾಡುವತ್ತ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ. ಈ ಬಿ.ಜೆ.ಪಿ. ಗೂಂಡಾಗಳಿಗೆ ಜನ ಸರಿಯಾದ ಪಾಠ ಕಲಿಸದಿದ್ದರೆ, ಮುಂದೆ ಕರ್ನಾಟಕದಲ್ಲಿ ಕನ್ನಡಿಗರೇ ಇಲ್ಲದಂತಾಗುತ್ತದೆ. ಕಾಶ್ಮೀರದಲ್ಲಿ ಹೇಗೆ ಹಿಂದೂಗಳು ಇಲ್ಲವೋ, ಅದೇ ರೀತಿ ಕರ್ನಾಟಕದಲ್ಲಿ ಕನ್ನಡಿಗರೂ ಬದುಕುವುದು ಕಷ್ಟವಾಗುತ್ತದೆ. ಬಿ.ಬಿ.ಎಂ.ಪಿ. ಚುನಾವಣೆಯಲ್ಲಿ ಹಣ ಹೆಂಡ ಹಂಚಿ ಕಾಂಗ್ರೆಸ್ ಸಂಸ್ಕೃತಿಯನ್ನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಳವಡಿಸಿಕೊಂಡು ಚುನಾವಣೆಯ ನಂತರ ಪಕ್ಕಾ ಕಾಂಗ್ರೆಸ್ ಪಕ್ಷದ ಇನ್ನೊಂದು ಮುಖವಾಗಿ ಹೊಮ್ಮಿದೆ.
ಧಿಕ್ಕಾರವಿರಲಿ ಈ ಕನ್ನಡ ದ್ರೋಹಿಗಳಿಗೆ....ಧಿಕ್ಕಾರವಿರಲಿ ಈ ಸರಕಾರಕ್ಕೆ....ಧಿಕ್ಕಾರವಿರಲಿ ಈ ಬಿ.ಜೆ.ಪಿ.ಗೆ.

1 comment:

ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ said...

ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ