Saturday, August 16, 2008
ರಕ್ಷಾಬಂಧನವೋ....ಭಿಕ್ಷಾಬಂಧನವೋ?
ಬೆಂಗಳೂರು ಆಗಸ್ಟ್ ೧೬: ಅರೆ! ಇವತ್ತು ರಕ್ಷಾ ಬಂಧನವಲ್ಲವೇ?. ಮರೆತೇ ಹೋಗಿತ್ತು. ಆದರೆ ಮೊದಲೆಲ್ಲ ಅಂದರೆ ನಾನು ಸಣ್ಣವನಿರುವಾಗ ನನ್ನ ದೊಡ್ಡಪ್ಪ ಆರ್.ಎಸ್.ಎಸ್.ನಲ್ಲಿ ಇದ್ದವರು ರಕ್ಷಾಬಂಧನಕ್ಕೆ ಒಂದು ವಾರ ಮೊದಲೇ ರೇಷ್ಮೆ ದಾರ ತಂದು (ಕೇಸರಿ ಬಣ್ಣದ) ಮನೆಯಲ್ಲಿಯೇ ರಕ್ಷೆಯನ್ನು ತಯಾರಿಸುತ್ತಿದ್ದರು. ಅದರ ಕೇಸರಿ ಬಣ್ಣದ ಮಹತ್ವವನ್ನು ಅವರು ಹೇಳುತ್ತಿದ್ದರು. "ನೋಡಪ್ಪಾ ಇದು ತ್ಯಾಗದ ಹಾಗೂ ಪೌರುಷದ ಸಂಕೇತ, ಇದನ್ನು ಕಟ್ಟಿಕೊಂಡಲ್ಲಿ ನಮ್ಮಲ್ಲಿ ಏನೋ ಹೊಸ ಚೈತನ್ಯ ಹುಟ್ಟುತ್ತದೆ...." ಹಾಗೆ ಹೀಗೆ.....ಆಗ ನಮಗೆ ಅದರ ಮಹತ್ವ ಅಷ್ಟಾಗಿ ಗೊತ್ತಿರಲಿಲ್ಲ. ಎಲ್ಲರೂ ಕಟ್ಟುತ್ತಾರಲ್ಲಾ ಹಾಗೆ...ಒಂದು ಕೈಗೆ ಎರಡು ಮೂರು ಕಟ್ಟಿಕೊಂಡು ಸಂಭ್ರಮ ಪಡುತ್ತಿದ್ದೆವು. ಶಾಲೆಯಲ್ಲಿ ಎಲ್ಲರಿಗೂ ತೋರಿಸುತ್ತಾ ಹೆಮ್ಮೆ ಪಡುತ್ತಿದ್ದೆವು. ಅಧು ಜಾರಿದಾಗ ಮತ್ತೆ ಬಿಚ್ಚಿ....ಮತ್ತೆ ಕಟ್ಟಿಕೊಳ್ಳುತ್ತಿದ್ದೆವು. ಆಗ ಅದಕ್ಕೆ ಹಣ ಕೊಡುವುದು ಎಲ್ಲ ಇರುತ್ತಿರಲಿಲ್ಲ. ಅದು ಉಚಿತವಾಗಿಯೇ ಸಿಗುತ್ತಿತ್ತು.
ಆದರೆ ಇಂದು ರಕ್ಷಾ ಬಂಧನವೆನ್ನುವುದು ಹೇಸಿಗೆ ಉಂಟುಮಾಡುತ್ತಿದೆ. ಅದು commercial ಆಗಿಬಿಟ್ಟಿದೆ. ಅಂದರೆ ರಕ್ಷಾಬಂಧನ ಕಟ್ಟಿಸಿಕೊಂಡವನು ಕಡ್ಡಾಯವಾಗಿ ಏನಾದರೂ (ಪ್ರೀತಿ ಇಲ್ಲದಿದ್ದರೂ) ಕೊಡಲೇಬೇಕು. ಕನಿಷ್ಠ ಜೇಬಲ್ಲಿರುವ ಹತ್ತು, ಇಪ್ಪಾತ್ತಾದರೂ ಸರಿ ಅಡ್ಡಿ ಇಲ್ಲ. ಇಲ್ಲವೇ ಜೋಬಿಗೇ ಕೈ ಹಾಕಿ ಕಿತ್ತುಕೊಳ್ಳುವಂತಹ ಸಂಪ್ರದಾಯ. ಈಗ ಬರುತ್ತಿರುವ ಹೊಸ ತರಹದ, ನವ ನವೀನ ಶೈಲಿಯ ರಕ್ಷಾಬಂಧನಗಳು ಒಂದೇ ದಿನಕ್ಕೆ, ಒಂದೇ ಘಳಿಗೆಗೆ ಕಿತ್ತು ಹೋಗುವಂತಹವು.
ಅಲ್ಲದೆ ಅವುಗಳಿಗೆ ಹೆಚ್ಚು ಮಹತ್ವವೇ ಇಲ್ಲ, ಇದೆಲ್ಲ ಒಂದು ಗೊಡ್ಡು ಸಂಸ್ಕೃತಿಯಾಗಿ ಬಿಟ್ಟಿದೆ. ಇದು ಈಗಿನ ಜನರ style ಆಗಿಬಿಟ್ಟಿದೆ. ಇವತ್ತು ರಕ್ಷಾಬಂಧನ ಕಟ್ಟಿಕೊಳ್ಳುತ್ತಾರೆ ನಾಳೆ ಪ್ರೇಮಿಗಳ ಪಾರ್ಕ್‌ನಲ್ಲಿ ಸುತ್ತುತ್ತಿರುತ್ತಾರೆ. ಅಂದರೆ ರಕ್ಷಾಬಂಧನ ಇಂದು ತನ್ನ ನಿಜವಾದ ಅರ್ಥವನ್ನು ಕಳೆದುಕೊಂಡಿದೆ. ಏನಿದ್ದರೂ ಭಿಕ್ಷೆ ಬೇಡುವ ಇನ್ನೊಂದು ವಿಧಾನವಾಗಿದೆ. ನಮ್ಮ ಜನಕ್ಕೆ ನಿಜವಾದ ಸಂಸ್ಕೃತಿ ಬೇಡ, ಈಗಿನ ಪ್ರೇಮಿಗಳ ದಿನ, ಗೆಳೆಯರ ದಿನ, ತಂದೆಗಳ ದಿನ, ತಾಯಂದಿರ ದಿನ...ಇವೆಲ್ಲಾಕ್ಕೂ ಪ್ರತ್ಯೇಕವಾದ ದಿನ ಬೇಕಾಗಿದೆ. ಅಂದರೆ ಅವರಿಗೆ ವರ್ಷಪೂರ್ತಿ ಬೇರೆ ಸಂಸ್ಕೃತಿರಹಿತ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಅಸಂಸ್ಕೃತರಾಗಿ...ಸುಸಂಸ್ಕೃತರಾಗುವುದಕ್ಕೆ ಇದೊಂದು ನೆಪ ಮಾತ್ರ. ಆದರೆ ಇದನ್ನು ಮನಃಪೂರ್ವಕವಾಗಿ ಅವರು ಮಾಡುತ್ತಿಲ್ಲ. ಕೇವಲ ಶೈಲಿಗಾಗಿ....Styleಗಾಗಿ......
Subscribe to:
Post Comments (Atom)
1 comment:
Whatever you are telling is right. But other countries they do not have time for "love". That's why they want to love once a year, they want to meet their father, mother,sister, brother in a particular day once in an year. But why it is required for Indians?. These bloody people want to currupt our culture and these girls want to become prostitutes by celebrating "Lover's Day".
Post a Comment